ಎಂ.ಜಿ.ಎಂ ಕಾಲೇಜಿನಲ್ಲಿ ಮೇಜರ್. ಆನಂದ್ ಶಿರಾಲಿ
ಮೇಜರ್. ಶಿರಾಲಿ ಅವರು ಎಂ.ಜಿ ಎಂ ಕಾಲೇಜನ ಹಳೆ ವಿದ್ಯಾರ್ಥಿ ಅಲ್ಲದೆ ಈ ಕಾಲೇಜಿನಲ್ಲಿ ಎನ್.ಸಿ.ಸಿ ನೇವಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನದಲ್ಲಿ ಶಿಸ್ತನ್ನು ಕಾಯ್ದುಕೊಂಡವರು.ಇವರು ವಿದ್ಯಾರ್ಥಿಯಾಗಿರುವಾಗಲೇ ಭಾರತದ ಸೇನೆಗೆ ಸೇರಬೇಕು ಎಂಬ ಕನಸನ್ನು ಇಟ್ಟುಕೊಂಡಿದ್ದಲ್ಲದೆ ಅದಕ್ಕೆ ಬೇಕಾಗುವ ಪೂರ್ವತಯಾರಿಯನ್ನು ಮಾಡುತ್ತಾ ಬರುತ್ತಿದ್ದರು. ಇವರು ಸೇನೆಗೆ ಸೇರಲು ಸ್ಪೂರ್ತಿದಾಯಕ ಇವರು ನೋಡಿದ ಆರ್ಮಿಗೆ ಸಂಬಂಧಪಟ್ಟಂತಹ ಸಿನೆಮಾ ಕಾರಣ.ಇವರು ವಿದ್ಯಾರ್ಥಿಗಳಿಗೆ ದೇಶದ ಬಗ್ಗೆ, ನಾಡಿನ ಬಗ್ಗೆ ಈಗಿನ ಯುವಶಕ್ತಿ ಯೋಚಿಸಬೇಕು. ದೇಶಭಕ್ತಿ ಮತ್ತು ದೇಶಪ್ರೇಮ ಎನ್ನುವುದು ಕೇವಲ ಫೇಸ್ ಬುಕ್, ವ್ಯಾಟ್ಸಪ್ ನಲ್ಲಿ ಸ್ವಾತಂತ್ರ್ಯ ಮತ್ತು ಗಣರಾಜ್ಯೋತ್ಸವವನ್ನು ಆಚರಿಸುವಂತಾಗಬಾರದು.ವರ್ಷದ 365ದಿನ ಕೂಡ ನೆನಪಿನಲ್ಲಿ ಇಟ್ಟುಕೊಳ್ಳುವಂತಾಗಬೇಕು ಎಂದು ಕಿವಿಮಾತನ್ನು ಹೇಳಿದರು.ಎಂ.ಜಿ.ಎಂ ಕಾಲೇಜಿನ ಎನ್.ಸಿ.ಸಿ ಆರ್ಮಿ ಮತ್ತು ನೇವಿ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.
No comments:
Post a Comment